1 ಯೋಹಾನನು 4 : 1 (KNV)
ಪ್ರಿಯರೇ, ಅನೇಕ ಸುಳ್ಳುಪ್ರವಾದಿಗಳು ಲೋಕದೊಳಗೆ ಹೋಗಿರುವದರಿಂದ ನೀವು ಎಲ್ಲಾ ಆತ್ಮಗಳನ್ನು ನಂಬದೆ ಆಯಾ ಆತ್ಮಗಳು ದೇವರಿಗೆ ಸಂಬಂಧವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.
1 ಯೋಹಾನನು 4 : 2 (KNV)
ಯೇಸು ಕ್ರಿಸ್ತನು ಶರೀರದಲ್ಲಿ ಬಂದನೆಂದು ಒಪ್ಪಿಕೊಳ್ಳುವ ಪ್ರತಿಯೊಂದು ಆತ್ಮವು ದೇವರಿಗೆ ಸಂಬಂಧಪಟ್ಟದ್ದಾಗಿದೆ; ಇದರಿಂದ ನೀವು ಈ ಆತ್ಮನು ದೇವರಾತ್ಮನೆಂದು ತಿಳಿದುಕೊಳ್ಳು ತ್ತೀರಿ.
1 ಯೋಹಾನನು 4 : 3 (KNV)
ಯೇಸು ಕ್ರಿಸ್ತನು ಶರೀರದಲ್ಲಿ ಬಂದನೆಂದು ಒಪ್ಪಿಕೊಳ್ಳದಿರುವ ಪ್ರತಿಯೊಂದು ಆತ್ಮವು ದೇವರಿಗೆ ಸಂಬಂಧಪಟ್ಟದ್ದಲ್ಲ; ಅದು ಕ್ರಿಸ್ತವಿರೋಧಿಯ ಆತ್ಮ ವಾಗಿದೆ. ಅದು ಬರುವದೆಂಬದನ್ನು ನೀವು ಕೇಳಿ ದ್ದೀರಲ್ಲಾ; ಈಗಲೂ ಅದು ಲೋಕದಲ್ಲಿ ಇದೆ.
1 ಯೋಹಾನನು 4 : 4 (KNV)
ಚಿಕ್ಕಮಕ್ಕಳೇ, ನೀವು ದೇವರಿಗೆ ಸಂಬಂಧಪಟ್ಟವರಾ ಗಿದ್ದೀರಿ. ಅವರನ್ನು ಜಯಿಸಿದ್ದೀರಿ. ನಿಮ್ಮಲ್ಲಿರುವಾತನು ಲೋಕದಲ್ಲಿ ಇರುವವನಿಗಿಂತ ದೊಡ್ಡವನಾಗಿದ್ದಾನೆ.
1 ಯೋಹಾನನು 4 : 5 (KNV)
ಅವರು ಲೋಕಸಂಬಂಧಿಗಳಾಗಿದ್ದಾರೆ; ಈ ಕಾರಣ ದಿಂದ ಅವರು ಲೋಕಸಂಬಂಧವಾಗಿ ಮಾತನಾ ಡುತ್ತಾರೆ ಮತ್ತು ಲೋಕದವರು ಅವರ ಮಾತನ್ನು ಕೇಳುತ್ತಾರೆ.
1 ಯೋಹಾನನು 4 : 6 (KNV)
ನಾವಂತೂ ದೇವರಿಗೆ ಸಂಬಂಧಪಟ್ಟವ ರಾಗಿದ್ದೇವೆ; ದೇವರನ್ನು ಬಲ್ಲವನು ನಮ್ಮ ಮಾತನ್ನು ಕೇಳುತ್ತಾನೆ; ದೇವರಿಗೆ ಸಂಬಂಧಪಡದವನು ನಮ್ಮ ಮಾತನ್ನು ಕೇಳುವದಿಲ್ಲ. ಇದು ಸತ್ಯದ ಆತ್ಮ, ಅದು ಸುಳ್ಳಿನ ಆತ್ಮ ಎಂದು ಇದರಿಂದಲೇ ನಾವು ತಿಳಿದು ಕೊಳ್ಳುತ್ತೇವೆ.
1 ಯೋಹಾನನು 4 : 7 (KNV)
ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಯಾಕಂದರೆ ಪ್ರೀತಿಯು ದೇವರಿಂದಾಗಿದೆ. ಪ್ರೀತಿ ಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ.
1 ಯೋಹಾನನು 4 : 8 (KNV)
ಪ್ರೀತಿಯಿಲ್ಲದ ವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಯಾಗಿದ್ದಾನೆ.
1 ಯೋಹಾನನು 4 : 9 (KNV)
ನಾವು ಆತನ ಮೂಲಕ ಜೀವಿಸು ವದಕ್ಕಾಗಿ ದೇವರು ತನ್ನ ಒಬ್ಬನೇ ಮಗನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಲ್ಲಿಯೇ ದೇವರ ಪ್ರೀತಿಯು ನಮ್ಮ ಕಡೆಗೆ ಪ್ರತ್ಯಕ್ಷವಾಗಿದೆ.
1 ಯೋಹಾನನು 4 : 10 (KNV)
ನಾವು ದೇವರನ್ನು ಪ್ರೀತಿಸಿ ದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ತನ್ನ ಮಗನನ್ನು ಕಳುಹಿಸಿ ಕೊಟ್ಟದ್ದರಲ್ಲಿಯೇ ಆತನ ಪ್ರೀತಿಯು ಇರುತ್ತದೆ.
1 ಯೋಹಾನನು 4 : 11 (KNV)
ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ.
1 ಯೋಹಾನನು 4 : 12 (KNV)
ದೇವರನ್ನು ಯಾರೂ ಎಂದೂ ನೋಡಿಲ್ಲ; ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ ಮತ್ತು ಆತನ ಪ್ರೀತಿಯು ನಮ್ಮಲ್ಲಿ ಸಿದ್ಧಿಗೆ ಬರುತ್ತದೆ.
1 ಯೋಹಾನನು 4 : 13 (KNV)
ಆತನು ನಮಗೆ ತನ್ನ ಆತ್ಮದಲ್ಲಿ ಪಾಲನ್ನು ಅನುಗ್ರಹಿಸದ್ದರಿಂದಲೇ ನಾವು ಆತನಲ್ಲಿ ನೆಲೆಗೊಂಡಿದ್ದೇವೆಂತಲೂ ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂತಲೂ ತಿಳಿದುಕೊಳ್ಳು ತ್ತೇವೆ.
1 ಯೋಹಾನನು 4 : 14 (KNV)
ತಂದೆಯು ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವದನ್ನು ನಾವು ನೋಡಿದ್ದೇವೆ ಮತ್ತು ಸಾಕ್ಷಿ ಹೇಳುತ್ತೇವೆ.
1 ಯೋಹಾನನು 4 : 15 (KNV)
ಯೇಸು ದೇವರ ಮಗನಾಗಿ ದ್ದಾನೆಂದು ಯಾವನು ಒಪ್ಪಿಕೊಳ್ಳುತ್ತಾನೋ ಅವನಲ್ಲಿ ದೇವರು ನೆಲೆಗೊಂಡಿದ್ದಾನೆ, ಅವನು ದೇವರಲ್ಲಿ ನೆಲೆಗೊಂಡಿದ್ದಾನೆ.
1 ಯೋಹಾನನು 4 : 16 (KNV)
ನಮ್ಮ ಕಡೆಗಿರುವ ದೇವರ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ, ಅದನ್ನು ನಂಬಿದ್ದೇವೆ. ದೇವರು ಪ್ರೀತಿಯಾಗಿದ್ದಾನೆ; ಪ್ರೀತಿಯಲ್ಲಿ ನೆಲೆ ಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ, ಮತ್ತು ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.
1 ಯೋಹಾನನು 4 : 17 (KNV)
ನ್ಯಾಯತೀರ್ಪಿನ ದಿನದಲ್ಲಿ ನಮಗೆ ಧೈರ್ಯ ವಿರುವಂತೆ ನಮ್ಮ ಪ್ರೀತಿಯು ಸಿದ್ಧಿಗೆ ಬಂತು. ಯಾಕಂದರೆ ಆತನು ಎಂಥವನಾಗಿದ್ದಾನೋ ನಾವು ಅಂಥವ ರಾಗಿಯೇ ಈ ಲೋಕದಲ್ಲಿದ್ದೇವೆ.
1 ಯೋಹಾನನು 4 : 18 (KNV)
ಪ್ರೀತಿಯಲ್ಲಿ ಹೆದರಿಕೆಯಿಲ್ಲ; ಆದರೆ ಪೂರ್ಣ ಪ್ರೀತಿಯು ಹೆದರಿಕೆ ಯನ್ನು ಹೊರಡಿಸಿಬಿಡುತ್ತದೆ. ಯಾಕಂದರೆ ಭಯವಿರು ವಲ್ಲಿ ಯಾತನೆಯಿರುವದು. ಭಯಪಡುವವನು ಪ್ರೀತಿ ಯಲ್ಲಿ ಸಿದ್ಧಿಗೆ ಬಂದವನಲ್ಲ.
1 ಯೋಹಾನನು 4 : 19 (KNV)
ಆತನು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದಲೇ ನಾವು ಆತನನ್ನು ಪ್ರೀತಿಸುತ್ತೇವೆ.
1 ಯೋಹಾನನು 4 : 20 (KNV)
ಒಬ್ಬನು--ನಾನು ದೇವರನ್ನು ಪ್ರೀತಿಸುತ್ತೇನೆ ಎಂದು ಹೇಳಿ ತನ್ನ ಸಹೋದರನನ್ನು ಹಗೆ ಮಾಡಿದರೆ ಅವನು ಸುಳ್ಳುಗಾರನಾಗಿದ್ದಾನೆ. ಯಾಕಂದರೆ ತಾನು ಕಾಣುವ ಸಹೋದರನನ್ನು ಪ್ರೀತಿಸದವನು ಕಾಣದಿರುವ ದೇವರನ್ನು ಅವನು ಹೇಗೆ ಪ್ರೀತಿಸಾನು?
1 ಯೋಹಾನನು 4 : 21 (KNV)
ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಈ ಆಜ್ಞೆ ಯನ್ನು ನಾವು ಆತನಿಂದ ಹೊಂದಿದ್ದೇವೆ.

1 2 3 4 5 6 7 8 9 10 11 12 13 14 15 16 17 18 19 20 21